Wednesday, August 17, 2011

ರಕ್ಷಾಬಂಧನ

ರಕ್ತ ಹಂಚಿ ಹುಟ್ಟದಿದ್ದರೂ ನೀ ರಾಖಿ ಸೋದರ
ಕ್ಷಯವಾಗದಿರಲಿ ಈ ಪ್ರೀತಿ ನೆನೆಯೋ ನಿನ್ನ ರೀತಿ
ಬಂಧು ನೀನೆ ಈ ಸ್ನೇಹಲೋಕದಲಿ, ಎಳೆವ ನಾಡಿನಲಿ
ಧನದಿಂದಳೆಯದಿರು ನನ್ನ, ಬೇಕಿಲ್ಲ ಚಿನ್ನ ಇರು ನೀ ಚೆನ್ನ
ನನ್ನ ಮರೆತರೂ ನಿನ್ನ ಮರೆಯೆ ನಾ ನನ್ನ ಸಹೋದರನಾ
ಮೊದಲಕ್ಷರಗಳ ಸೇರಿಸಿ ನೀ ಪಡೆ ರಕ್ಷಾಬಂಧನ
ಪ್ರಶಸ್ತಿ.ಪಿ

ಕೃಷ್ಣಂಗೆ ದ್ರೌಪದಿ ರಾಖಿ ಕಟ್ಟಿದ್ದು , ಮುಸಲ್ಮಾನ ರಾಜ್ರಿಗೆ ರಜಪೂತ ಹೆಂಗಸ್ರು ರಾಖಿ ಕಟ್ಟಿದ್ದು ನಿಮಗೆ ಗೊತ್ತುಂಟೋ? ರಾಖಿ ಅಂದ್ರೆ ಬರೀ ಆ ತರ ಅಷ್ಟೇ ಅಲ್ಲ ಮಾರ್ರೇ. . ಮೂರು ವರ್ಷದ ತಮ್ಮಂಗೆ ಅಕ್ಕ ಕಟ್ಟೋದು, ಮೂವತ್ತು ವರ್ಷ ಆಗಿ ಮದ್ವೆ ಆಗಿ ಮಕ್ಳಾದ ಮೇಲೂ ಪ್ರತೀ ವರ್ಷ ರಾಖಿ ಕಳ್ಸೋದುಂಟು.. ತುಂಬಾ ಬ್ಯಾಸ್ರದಲ್ಲಿದ್ದಾಗ ನಿನ್ನ ಸಪೋರ್ಟಿಗೆ ನಾವೆಲ್ಲಾ ಇದೀವಿ ಬ್ರದರ್ ಅಂತ ರಾಖಿ ತಂಗ್ಯಂದ್ರು ಹೇಳ್ದಾಗ ಸ್ಯಾನೆ ಖುಸಿ ಆತೈತೆ ಗುರೂ.. ಮಳ್ ತಮ್ಮ, ಹೇಳೋರು ಕೇಳೋರು ಯಾರೂ ಇಲ್ಲೆ ನಿಂಗೆ ಅಂದ್ಕಂಡ್ಯನಾ? ಅಮ್ಮಂಗೆ ಹೇಳ್ತಿ ತಡಿ ಹೇಳಿ ರಾಖಿ ಅಕ್ಕ ಬೈದಾಗ ಏನೋ ಒಂಥರಾ ಅನುಸ್ತು. ಸೂಪರು .. ಹೋಗ್ತೈತೆ ಮಗಾ ಹೇಳಿ ಹಿಂಬಾಲಿಸ್ತಿರೋ ಹುಡುಗ್ರೆಲ್ಲಾ ಈ ರಾಖಿ ಕಂಡ ತಕ್ಷಣನೇ ಓಡೋದು ನೋಡೋಕೆ ಒಂಥರಾ ಮಜಾ. ಕಟ್ಟಿದ ಚಣನೇ ಜೊತಿಗುಟ್ಟಿದ ಅಣ್ಣನಾ ಅನ್ನಂಗೆ ಡೌಟು ಬರೋ ಹಂಗೆ ಬದ್ಲಾತ್ತಾರೆ ಸಿವ ಕೆಲೋರು..
- ಪಾಪಣ್ಣ & ಪೀಪಣ್ಣ

No comments:

Post a Comment