Thursday, August 18, 2011

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?

ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ ನೆಟ್ಟಣ್ಣನ್ನ ಕೇಳಿದ್ರೆ ಸುಮಾರು ಮೀನೆಣ್ಣೆ ಬಗ್ಗೆ ಮಾಹಿತಿ ಒಗ್ದ. ಅದಕ್ಕೂ ಇದಕ್ಕೂ ಎಂತಾ ಸಂಬಂಧ ಇಶ್ಶೀ ಅಂತೀರಾ? ನೀವು ಅಂದ್ಕೊಂಡ ಹಾಗಿಲ್ಲ ಓದಿ ಮುಂದೆ

ಕೆಲವೊಂದು ಮಾತ್ರೆಗಳಲ್ಲಿರೋ ಅಂಶಗಳು ಇಂಥಲ್ಲೇ ಜೀರ್ಣವಾಗ್ಬೇಕು ಅಂತಿರುತ್ತೆ. ಅಂದ್ರೆ ಹೊಟ್ಟೇಲಿ,ಕರುಳಲ್ಲಿ ಹೀಗೆ. ಹೊಟ್ಟೆಯ ಆಮ್ಲ ಗುಣದಿಂದ ಮಾತ್ರೆಲಿರೋ ಅಂಶಗಳು ಹಾಳಾಗ್ಬೋದು ಅಥವಾ ಬೇರೆ ರೀತಿ ಪ್ರತಿಕ್ರಿಯೆಗಳು , ವಿಚಿತ್ರ ವಾಸನೆಗಳು ಬರ್ಬೋದು. ಹಾಗಾದ್ರೆ ಕರುಳಲ್ಲಿ ಜೀರ್ಣ ಆಗ್ಬೇಕಾದ ಮಾತ್ರೆನ ಕರುಳಿಗೆ ಹೇಗೆ ತಲುಪಿಸೋದು.. ತಿಂದಿದ್ದೆಲ್ಲಾ ಹೊಟ್ಟೆ ಮೂಲಕನೇ ಕರುಳಿಗೇ ಹೋಗ್ಬೇಕಲ್ಲಾ? ಅದಕ್ಕೇ ಅಂತನೇ enteric coating ಅನ್ನೋ ತಂತ್ರ ಇರೋದು. ಅದೇನಪಾ ಅಂದ್ರೆ ಮಾತ್ರೇನ ಪ್ರತ್ಯಾಮ್ಲದಿಂದ ಮುಚ್ಚೋದು(cover).enteric ಅಂದ್ರೆ ಕರುಳು ಅಂತನೇ ಅರ್ಥ. ಹಾಗಾಗಿ ಕರುಳಲ್ಲಿ ಜೀರ್ಣ ಆಗೋ ಮಾತ್ರೆ ಅಲ್ಲಿಗೇ ಹೋಗುತ್ತೆ. ಅಲ್ಲಿರೋ ಪ್ರತ್ಯಾಮ್ಲಗಳಲ್ಲಿ ಕರಗಿ ಅದರಲ್ಲಿನ ಅಂಶಗಳ್ನ ಬಿಡುಗಡೆ ಮಾಡುತ್ತೆ. ನಾವು ನೋಡೋ ಕ್ಯಾಪ್ಲೂಸ್ಗಳ ಕೋಟಿಂಗ್ ಇದೇನೆ. ಇದನ್ನ ಮೇಣಗಳು, ಹಲ ತರದ fatty acid ಗಳಿಂದ ಮಾಡಿರ್ತಾರೆ..

ವೀಕ್ಷಕರೇ ಆಗ್ಲೇ ಮೀನಿನ ವಾಸ್ನೆ ಅಂದ್ನಲಾ.. ಈಗ ನೆನ್ಪಾಯ್ತು ನೋಡಿ.. ಸುಮಾರು ಕಂಪನಿಗಳು ಮೀನೆಣ್ಣೇನ ತಮ್ಮ ಮಾತ್ರೆಗಳಲ್ಲಿ ಉಪಯೋಗಿಸ್ತಾರೆ. ಆದ್ರೆ ಅದು ಹೊಟ್ಟೆಗೆ ಹೋದಾಗ ಬಾಯಿಂದ ಮೀನಿನ ಕೊಳೆತ ವಾಸನೆ ಬರೋದು ಇತ್ಯಾದಿ ಆಗ್ತಿತ್ತಂತೆ. ಅದಕ್ಕೆ ಅದಕ್ಕೂ ಈ ಎಂಟರಿಕ್ ಅಂಟು ಉಪಯೋಗಿಸ್ತಾರಂತೆ.. ನಿಂಗೂ ?

ಏ ಕೆಂಚಾ ನಿಲ್ಸಾ.. ಎಲ್ಲ ಟಿ.ವಿ ಆಫ್ ಮಾಡಕತ್ತಿದ್ರು.. ಕಟ್ ಕಟ್.. ವೀಕ್ಷಕರೇ ನಮ್ಮ ಸಂಚಿಕೆ ಹೇಗಿತ್ತು? ಮತ್ತೆ ಭೇಟಿಯಾಗೋಣ ಶುಭರಾತ್ರಿ ಎನ್ನುತ್ತಾ ಪಾಪಣ್ಣ ಆನ್ಲೈನ್ ಟಿ.ವಿ.

ಮಾಹಿತಿ ಮೂಲ: ಗೂಗಲ್, ವಿಕಿಪೀಡಿಯ

Composition of coatings
1)methyl acrylate-methacrylic acid copolymers
2)cellulose acetate succinate
3)hydroxy propyl methyl cellulose phthalate
4)hydroxy propyl methyl cellulose acetate succinate (hypromellose acetate succinate)
5)polyvinyl acetate phthalate (PVAP)
6)methyl methacrylate-methacrylic acid copolymers
7)Sodium alginate and stearic acid

No comments:

Post a Comment