Friday, November 4, 2011

ವಿಶ್ವ ಸಂಸ್ಥೆ ಹೆಸರಲ್ಲಿ ಮತ್ತಿತರ ಮಿಂಚೆ ಮೋಸಗಳು!!!

ಶೀರ್ಷಿಕೆ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ಜೊತೆಗಿರುವ ಚಿತ್ರಗಳನ್ನು ನೋಡಿ.. ವಿಶ್ವಸಂಸ್ಥೆಯಿಂದ ಎಂಬ ಸಂದೇಶವನ್ನು ಒಳಪಟ್ಟಿಯಲ್ಲಿ ನೋಡಿ ಒಮ್ಮೆ ಆಶ್ಚರ್ಯವಾಯಿತು.. ಅದು spam ಗೆ ಹೋಗದೇ ಒಳಪೆಟ್ಟಿಗೆಗೇ ಬಂದಿದೆಯೆಂದು ಒಮ್ಮೆ ಆಶ್ಚರ್ಯವಾಯಿತು..(ಚಿತ್ರ೧)



ತೆಗೆದು ನೋಡಿದರೆ "ನಿಮಗೆ ಬರಬೇಕಾದ ಸಂಬಳ ಬಂದಿದೆಯಾ?" ಎಂಬ ಸಂದೇಶ.(ಚಿತ್ರ-೨) ತಕ್ಷಣ ನಿಮ್ಮ ಹೆಸರು, ವಿಳಾಸ, ಪಾಸಪೋರ್ಟು ನಂಬರ್, ಮೊಬೈಲು, ಸ್ಥಿರ ದೂರವಾಣಿ ನಂಬರುಗಳೊಂದಿಗೆ ಪ್ರತಿಕ್ರಯಿಸಿ ಎಂಬ ಒಕ್ಕಣೆ ಬೇರೆ. ಅವರು ಕೊಟ್ಟಿದ್ದ ವೆಬ್ ಕೊಂಡಿ ಸರಿಯಾಗೇ ಇದೆ(ಚಿತ್ರ-೩).. ಸಂಶಯ ಶುರು ಆಯ್ತು..

ನಾನು ವಿಶ್ವಸಂಸ್ಥೆಗೆ ಯಾವ ರೀತಿಯಲ್ಲೂ ಸಂಬಂಧ ಪಟ್ಟವನಲ್ಲ..ಅಂತಹದರಲ್ಲಿ ಅವರೇಕೆ ನನಗೆ, ಯಾತಕ್ಕಾಗಿ ಸಂಬಳ ಕೊಡಬೇಕು? ಮೊಬೈಲ್ ನಂಬರು, ಇತರೆ ಮಾಹಿತಿಗಳನ್ನ ದುರುಪಯೋಗಪಡಿಸಿಕೊಳ್ಳುವ ಯಾವುದೋ ವ್ಯವಸ್ಥಿತ ಜಾಲ ಅದಿರಬೇಕು ಅಂತ ಆ ಮಿಂಚೆಯನ್ನು ನಾಶ ಮಾಡಿದೆ. ಅದಕ್ಕೂ ಮೊದಲು ಯಾವ ಸಂಬಳ ಎಂಬ ಉತ್ತರ ಕಳಿಸಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ.. ನಿಮಗೂ ಇಂಥಹ ಸಂದೇಶ ಬರಬಹುದು.. ಅವರು ಕೇಳಿದ ಮಾಹಿತಿ ಕೊಟ್ಟು ಮೋಸ ಹೋಗದಿರಿ..

No comments:

Post a Comment