Saturday, November 3, 2012

ನೀರ ಮಾರಿ ನೀಲಮ

ಸಾವಿರಾರು ಜನರ ನಿದ್ರೆ/ಬದುಕು ನುಂಗಿದ ನೀಲಮನ ಕುರಿತೊಂದು ಪದ್ಯ..
ನೀರಲೇ ಜೀವನ, ನೀರಲೇ ಸಾವಿದು
ಬೀಸಿ ಬಂದ ಮೃತ್ಯು ನೀನು ನೀಲಮ
ಕಾಲನ ಕರೆಯಿದು, ಉಳಿಯದು ಜೀವವು
ಏರಿ ಬಂದ ಸಾವು ನೀನು ನೀಲಮ |೧

ರಚ್ಚೆ ಹಿಡಿದ ಮಗುವಿನಳುವೆ
ಬಿಡದೆ ಸುರಿವ ಮಳೆಯು
ತಂದು ರಸ್ತೆ ಮೇಲೆಲ್ಲಾ
ಮೋರಿ ಗಬ್ಬು ಕೊಳೆಯು |೨

ಕೆರೆಯಲ್ಲಿಹ ಬಡಾವಣೆ, ಹಾಹಾಕಾರ
ನುಂಗಿ ನಕ್ಕವರಿಂದಳು ಧಾರಾಕಾರ
ಫಸಲು ಭೂಮಿ ಸೈಟು ಎಂದ ನೀರಿಂಗುವ ಜಾಗವ
ಆಪೋಶನಕ್ಕೆಂದೆ ನೀಲಮನ ಅವತಾರ |೩

ಕಾಡೆಲ್ಲವ ಕಡಿದ ಮನೆಗೆ
ಮರಮುಟ್ಟುವ ಸುಟ್ಟು ಮಾರು
ಜಗವೆಲ್ಲವು ನಿಂದೆ ಎಂದು
ಬಿಡುವಿಲ್ಲದೆ ಸೊಕ್ಕಿ ಹಾರು
ತಿರುಗುತಿರುವ ಕಾಲ ಚಕ್ರ
ಬಂದಿಹಳು ನೀಲಮ,
ಬುದ್ದಿ ಕಲಿಸೆ ಮಾನವ |೪

ಧರೆಯ ಶೋಕ ನೋಡಲಾರ ,ಬೆಂಕಿಯುಗುಳಿ ಗಗನ
ಸಿಡಿಲು, ಗುಡುಗು ಸಾಲದೆಂದು ಇವಳ ತಂದ ಪವನ
ಇನ್ನಾದರು ಬುದ್ದಿ ಕಲಿ, ಇಲ್ಲ ಪ್ರಾಣ ಹರಣ
ಕಾಯುತಿಹಳು ಕೊಲ್ಲಲೆಂದು ನೀರ ಮಾರಿ ನೀಲಮ |೫

10 comments:

  1. ಸಕಾಲಿಕವಾಗಿ ಮೂಡಿದೆ.ಮಾನವ ಬುದ್ದಿ ಕಲಿಯದೇ ಹೋದರೆ ಆಗುವ ಅನಾಹುತಗಳ ಬಗ್ಗೆ ಬೆಳುಕು ಚೆಲ್ಲಿದ್ದೀರಿ.ನೀರಮಾರಿಯ ಶಾಪ ಯಾರಿಗೂ ತಟ್ಟದಿರಲಿ.ಮಾನವ ವಿನಾಶಕ್ಕೆ ಬೇಕಿರುವುದನ್ನು ಮಾಡದೇ ಪ್ರಕೃತಿಯ ಸಮತೋಲನವನ್ನು ಕಾಪಾಡುವ ನಿಟ್ಟಿನಲ್ಲಿ ಸಾಗಲಿ

    ReplyDelete
    Replies
    1. ಹೌದು ಸೋಮಶೇಖರರೇ.. ವಿನಾಶಕ್ಕೆ ಮುನ್ನವೇ ಎದ್ದೇಳು ಎಂದು ಪ್ರಕೃತಿ ಹಲವು ರೂಪದಲ್ಲಿ ಹೇಳುತ್ತಲೇ ಇದೆ. ಆದರೆ ನಾವು ಕೇಳುತ್ತಾ ಇಲ್ಲ ಅಷ್ಟೆ ..

      Delete
  2. ಸಕಾಲಿಕವಾಗಿ ಮೂಡಿ ನಿಂತ ಕವಿತೆ. ವಸ್ತುವನ್ನು ಹೊರಳಿಸಿಕೊಂಡಿರುವ ಕವಿಯ ಜಾಣ್ಮೆ ಮೆಚ್ಚುವಂತದ್ದು. ನೈಸರ್ಗಿಕ ಚಂಡಮಾರುತದಿಂದ ಬದುಕಿನ ಪಾಠ ಕಲಿಯಬೇಕೆಂಬ ಕವಿಯ ಆಶಯ ಅಭಿನಂದನಾರ್ಹ. ಮೆಚ್ಚಿದೆ.

    ReplyDelete
    Replies
    1. ಧನ್ಯವಾದಗಳು "ಮಂಜಿನ ಹನಿ" :-)

      Delete
  3. ಆಶಯ ಪೂರ್ಣ ಕವನ. ಮಾನವ ಇನ್ನಾದರೂ ಬುದ್ದಿ ಕಲಿತಾನೇ?

    ReplyDelete
    Replies
    1. ಧನ್ಯವಾದಗಳು ಬದ್ರಿಯವರೇ..
      ಇನ್ನಾದರೂ ಕಲಿಯಲಿ ಎಂಬುದೇ ಕವನದ ಆಶಯ :-)

      Delete
  4. ಉತ್ತಮವಾದ ಕವಿತೆ . ಪರಿಸರವನ್ನು ನಾಶ ಮಾಡಿ ,ಆದೇನೋ ಸಾಧನೆಗೆ ಹೊರಟ ಮನುಷ್ಯ ಜನಾಂಗದ ಅಂತಿಮ ದಿನಗಳು ಹತ್ತಿರವಾಗುತ್ತಿದೆ .ಭೂಮಿ ಒಡೆಯುತ್ತಿದೆ ,ಹಿಮ ಕರಗಿ ಹೊಳೆ ನದಿ ಉಕ್ಕಿ ಹರಿಯುತ್ತಿದೆ .ಮನುಜರಾದ ನಮಗೆ ನಾವೇ ಗುಂಡಿ ತೋಡಿದ್ದು .ಮುಂದೆ ನಾವೆಷ್ಟೂ ಚಿಂತಿಸಿದರೂ ಪ್ರಯೋಜನವಿಲ್ಲ

    ReplyDelete
    Replies
    1. ಧನ್ಯವಾದಗಳು ಪ್ರಮೋದರೇ..
      ನಿಮ್ಮ "ಬೀದಿಪಾಲಾದವರು" ಕವಿತೆ ಓದಿದೆ.. ಅದು ಕುಡಿತದ ದುಷ್ಪರಿಣಾಮಗಳ ಬಗ್ಗೆ ಹಿಡಿದ ಕನ್ನಡಿಯಂತೆ ತೋಚಿತು. ಸುಂದರ ಕವನಕ್ಕಾಗಿ ಅಭಿನಂದನೆಗಳು

      Delete