Tuesday, November 25, 2014

ಕರ್ನಾಟಕದ ಹೊಯ್ಸಳ ದೇಗುಲಗಳು-೮: ವೀರೇಶ್ವರ/ಪಾತಾಳೇಶ್ವರ ದೇಗುಲ ,ಬೇಲೂರು

ನಮ್ಮ ಕಲ್ಪನೆಯ ಇತಿಹಾಸ ಅಂತ ರೂಪುಗಳ್ಳೋದು ನಮಗೆ ಬಳುವಳಿಯಾಗಿ ಬಂದ ಹಿಂದಿನವರ ಮಾತುಗಳಿಂದ, ಪುಸ್ತಕಗಳಿಂದ ಅವುಗಳಿಗೆ ಮೂಲವಾದ ಶಾಸನಗಳಿಂದ ಅಥವಾ ಶಿಲ್ಪಗಳಿಂದ. ಇವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ ? ಆ ಇತಿಹಾಸವೆನ್ನೋದು ಈಗ ಇದ್ದಿರೋ ರೂಪದಲ್ಲಿರುತ್ತಿತ್ತೇ ? ಗೊತ್ತಿಲ್ಲ. ಇತಿಹಾಸದ ತಿರುಚುವಿಕೆ ಅಥವಾ ಮರೆಯುವಿಕೆ ಅಂತೆಲ್ಲಾ ನಾವು ಹೇಳೋಕೆ ಕಾರಣ ನಾವು ಇತಿಹಾಸ ಅಂತ ಭಾವಿಸಿದ್ದ ಘಟನೆಗಳ ವಿರುದ್ದದ ಸಾಕ್ಷಿಗಳು ದಕ್ಕಿದಾಗ. ಒಂದೊಮ್ಮೆ ಕೆಲ ಘಟನೆಗಳ ಬಗ್ಗೆ ಯಾವ ಶಾಸನಗಳೂ ದಕ್ಕದಿದ್ದಾಗ ಅಥವಾ ತಲೆಮಾರುಗಳ ನಡುವಣ ಕಾಲದ ಪಯಣದಲ್ಲಿ ಎಲ್ಲೋ ಮಾಯವಾದಾಗ ? ಆ ಘಟನೆಗಳೂ ಇತಿಹಾಸದ ಭವ್ಯಪುಟಗಳಲ್ಲಿ ಒಂದಾಗದೇ ನೇಪಥ್ಯದಲ್ಲಿ ಸೇರಬಹುದಾದ ಸಾಧ್ಯತೆ ಇರುತ್ತೆ. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಏನು ಅಂತ ಯೋಚನೆ ಮಾಡ್ತಾ ಇದ್ದೀರಾ ? ಅದೇ ಬೇಲೂರಿನ ಪಾತಾಳೇಶ್ವರ ದೇವಾಲಯ !
Backview of Pataleshwara  temple, Belur

ಬೇಲೂರು ಅಂದಾಕ್ಷಣ ಎಲ್ಲರ ಮನಸ್ಸಿಗೆ ಬರೋದು ಅಲ್ಲಿನ ಚೆನ್ನಕೇಶವ ದೇವಾಲಯ. ಅದಲ್ಲದೇ ಮತ್ತೆ ಅಂದ್ರೆ ನೆನಪಾಗೋದು ಅದೇ ಆವರಣದಲ್ಲಿರೋ ಕಪ್ಪೆ ಚೆನ್ನಿಗರಾಯ, ವೀರನಾರಾಯಣ ದೇವಸ್ಥಾನ, ರಂಗನಾಯಕಿ, ಸೌಮ್ಯ ನಾಯಕಿ ದೇವಸ್ಥಾನಗಳು. ಆದ್ರೆ ಈ ಸಲ ಬೇಲೂರಿಗೆ ಹೋಗ್ತಿದ್ದಾಗ ಅಲ್ಲಿ ಎಡಕ್ಕೆ ಪಾತಾಳೇಶ್ವರ ಬಲಕ್ಕೆ ಚೆನ್ನಕೇಶವ ದೇಗುಲ ಅಂತ ಮೈಲುಗಲ್ಲು ನೋಡಿ ಒಮ್ಮೆ ಅಚ್ಚರಿಯಾಯ್ತು. ಚೆನ್ನಕೇಶವ ನೋಡಿ ಇಲ್ಲಿಗೂ ಬರಬೇಕು ಅಂತ ನಿರ್ಧರಿಸಿದ್ದ ನಾವು ನಂತರ ಅಲ್ಲಿಗೂ ಬಂದೆವು. ಜೀರ್ಣೋದ್ದಾರ ನಡೆಯುತ್ತಿದ್ದ ವೀರೇಶ್ವರ ಅಥವಾ ಪಾತಾಳೇಶ್ವರ ದೇಗುಲದ ಚಿತ್ರಗಳು ಕೆಳಗಿವೆ..



Kalinga mardhana , Vishnu, Shilabalike(at the end) at Vireshwara or Pataleshwara temple Belur

Vishnu, Venugopala, Yaksha,Mrudanga vadaka, Gajasura Samhara @Pataleshwara Devalaya


ಪಾಳು ಬಿದ್ದ ಪಾತಾಳೇಶ್ವರನ ಅಳಿದುಳಿದ ಶಿಲ್ಪಗಳ ದುಸ್ಥಿತಿ :-(

Side view of Pataleshwara temple


ನವೆಂಬರ್ ಹನ್ನೆರಡರಂದು ಜೀರ್ಣೋದ್ದಾರ ಪೂರ್ಣಗೊಂಡು ಮತ್ತೆ ದರ್ಶನಕ್ಕೆ ತೆರೆಯಲ್ಪಟ್ಟ ಈ ದೇಗುಲದ ಜೀರ್ಣೋದ್ದಾರದ ಹೊಣೆ ಹೊತ್ತವರು ಧರ್ಮಸ್ಥಳದ ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಂತೆ. ಅಲ್ಲಲ್ಲಿ ಮೂಲ ಕಲ್ಲುಗಳು ಸಿಕ್ಕದೆ ಅವುಗಳ ಬದಲು ಹೊಸ ಸಿಮೆಂಟ್ ಹಾಕಿ ದೇಗುಲಕ್ಕೊಂದು ಹೊಸ ರೂಪ ಕೊಡೋ ಪ್ರಯತ್ನ ನಡೆದಿತ್ತಾದರೂ ಅಲ್ಲಿ ಇನ್ನೂ ಉಳಿದ ಮೂಲ ಶಿಲ್ಪಗಳು ಹೊಯ್ಸಳರ ಕಾಲದ್ದೇ ಎಂಬುದು ಜೀರ್ಣೋದ್ದಾರಕ್ಕೆ ಶ್ರಮಿಸಿದ ಗ್ರಾಮಸ್ಥರ ಅಂಬೋಣ. ಇದರ ಬಗ್ಗೆ ಶಾಸನಗಳಿಲ್ಲ, ಅದಿಲ್ಲ ಇವಿಲ್ಲ ಅಂತ ಸಾರಾಸಗಟಾಗಿ ತಳ್ಳಿ ಹಾಕೋ ಬದಲು ಈ ಶಿಲ್ಪಗಳ carbon dating ನಡೆದರೆ ಇವುಗಳ ಕಾಲ ಪತ್ತೆಹಚ್ಚಬಹುದೇನೋ. ಆ ನಿರಾಕರಣೆಯ ಅಂಶಗಳು ಸಿಕ್ಕೋವರೆಗೂ ಇದನ್ನೊಂದು ಹೊಯ್ಸಳ ದೇವಸ್ಥಾನ ಎಂದೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ..

ಮುಂದಿನ ಸಂಚಿಕೆಯಲ್ಲಿ: ಬೇಲೂರಿನ ಮುಖ್ಯ ದೇಗುಲಗಳು



1 comment: